ಸೋಮವಾರ, ಏಪ್ರಿಲ್ 3, 2017

ಅರಸೀಕೆರೆ ತಾಲ್ಲೂಕಿನ ಹಲವು ಟೆಲಿಪೋನ್ ಎಕ್ಸ್‌ಚೇಂಜ್ ನಿಷ್ಕ್ರಿಯ

ಓ.ಎಫ್.ಸಿ ಕೇಬಲ್ ತುಂಡಾಗಿ ಅರಸೀಕೆರೆ ತಾಲ್ಲೂಕಿನ ಹಲವು ಟೆಲಿಪೋನ್ ಎಕ್ಸ್‌ಚೇಂಜ್ ನಿಷ್ಕ್ರಿಯ


ಅರಸೀಕೆರೆ ಪಟ್ಟಣದ ಹುಳಿಯಾರ್ ರಸ್ತೆ ಶಿವಾಲಯದ ಮುಂಭಾಗದಲ್ಲಿ ಇಂದು ಬೆಳಿಗ್ಗೆ ರಸ್ತೆಕಾಮಗಾರಿ ಮಾಡುವ ಸಮಯದಲ್ಲಿ ಜೆಸಿಬಿ ಯಂತ್ರದ ಚಾಲಕರ ಅಜಾಗರೂಕತೆಯಿಂದಾಗಿ ಅರಸೀಕೆರೆ ದೂರವಾಣಿ ಕೇಂದ್ರದ ಪ್ರಮುಖ ಓ.ಎಫ್.ಸಿ ಕೇಬಲ್ ತುಂಡಾಗಿದ್ದು, ತಾಲ್ಲೂಕಿನ ದುಮ್ಮೇನಹಳ್ಳಿ, ಜೆ.ಸಿ.ಪುರ, ದೊಡ್ಡಮೇಟಿಕುರ್ಕೆ, ಮದ್ದರಹಳ್ಳಿ, ಕಣಕಟ್ಟೆ, ಕಲ್ಕುಂಡಿ ಗ್ರಾಮಗಳ ದೂರವಾಣಿ ವಿನಿಮಯ ಕೇಂದ್ರಗಳು ಸಂಪರ್ಕ ಕಳೆದುಕೊಂಡಿವೆ.  ಇದರಿಂದಾಗಿ ಈ ದೂರವಾಣಿ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ನೂರಾರು ಬಿ.ಎಸ್.ಎನ್.ಎಲ್ ಫೋನ್ ಗಳು ನಿಷ್ಕ್ರಿಯವಾಗಿ ಸಾರ್ವಜನಿಕರಿಗೆ ತೀವ್ರವಾದ ತೊಂದರೆಯುಂಟಾಗಿದೆ.   ಕಾಮಗಾರಿಯ ಮೊದಲೇ ಬಿ.ಎಸ್.ಎನ್.ಎಲ್ ಅಧಿಕಾರಿಗಳಿ ವಿಷಯ ತಿಳಿಸಿದ್ದರೆ, ಆ ಜಾಗದಲ್ಲಿ ಓ.ಎಫ್.ಸಿ ಕೇಬಲ್ ಹಾದುಹೋಗಿರುವ ಜಾಗಗಳನ್ನು ಚಾಲಕರಿಗೆ ತೋರಿಸುತ್ತಿದ್ದರು. ಆದರೆ ಬಿ.ಎಸ್.ಎನ್.ಎಲ್ ಅಧಿಕಾರಿಗಳ ಗಮನಕ್ಕೆ ತಿಳಿಸದೇ ಜೆಸಿಬಿ ಯಂತ್ರದಲ್ಲಿ ರಸ್ತೆಯನ್ನು ಅಗೆದದ್ದು ಈ ಸಮಸ್ಯೆಗೆ ಕಾರಣವಾಗಿದೆ.  ಜೆಸಿಬಿ ಯಂತ್ರದ ಚಾಲಕರಿಗೆ ಎಲ್ಲೆಲ್ಲಿ ಓ.ಎಫ್.ಸಿ ಕೇಬಲ್ ಹಾದುಹೋಗಿದೆ ಎಂದು ತಿಳಿಯದೇ ರಸ್ತೆಯನ್ನು ಅಗೆದಿದ್ದರಿಂದ, ಭೂಮಿಯೊಳಗಿದ್ದ ಓ.ಎಫ್.ಸಿ ಕೇಬಲ್ ತುಂಡುತುಂಡಾಗಿ ಹಲವು ದೂರವಾಣಿ ವಿನಿಮಯ ಕೇಂದ್ರಗಳು ಹಾಗೂ ಸಂಪರ್ಕಗಳು ನಿಷ್ಕ್ರಿಯವಾಗಿವೆ.  ಇದನ್ನು ಸರಿಪಡಿಸಲು ಕನಿಷ್ಟ ಮೂರು ದಿನಗಳು ಬೇಕಾಗಬಹುದು ಎಂದು ಬಿ.ಎಸ್.ಎನ್.ಎಲ್ ಸಿಬ್ಬಂದಿಗಳು ತಿಳಿಸಿದ್ದಾರೆ.

(ಚಿತ್ರಕೃಪೆ : ಬಿ.ಎಸ್.ಎನ್.ಎಲ್ ಅರಸೀಕೆರೆ)

ಅರಸೀಕೆರೆ ಹುಳಿಯಾರ್ ರಸ್ತೆಯಲ್ಲಿ ತುಂಡಾಗಿರುವ ಬಿ.ಎಸ್.ಎನ್.ಎಲ್ ಒ.ಎಫ್.ಸಿ ಕೇಬಲ್

ಅರಸೀಕೆರೆ ಹುಳಿಯಾರ್ ರಸ್ತೆಯಲ್ಲಿ ತುಂಡಾಗಿರುವ ಬಿ.ಎಸ್.ಎನ್.ಎಲ್ ಒ.ಎಫ್.ಸಿ ಕೇಬಲ್

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....