ಸೋಮವಾರ, ಏಪ್ರಿಲ್ 24, 2017

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಹಾರನಹಳ್ಳಿಅರಸೀಕೆರೆ ಹಾಸನ ರಾಜ್ಯ ರಸ್ತೆ ಹಾರನಹಳ್ಳಿ ಯಿಂದ ಗ್ರಾಮದ  ಚನ್ನಕೇಶವ ದೇವಾಲಯಕ್ಕೆ ಹೋಗುವ ಮುಖ್ಯ ರಸ್ತೆ ಹಾಗೂ ಮಸೀದಿಗೆ ಹೋಗುವ  ಮುಖ್ಯ ರಸ್ತೆ  ಯಿಂದ ಕಾಂಕ್ರೀಟ್ ರಸ್ತೆ ಕಾಗಾರಿಗೆ ಶಾಸಕ ಕೆ.ಎಂ.ಶಿವಲೀಂಗೇಗೌಡ ಭೂಮಿ ಪೂಜೆ ಸಲ್ಲಿಸಿದರು ನಂತರ ಮಾತನಾಡಿ ಲೋಕೋಪಯೋಗಿ ಇಲಾಖೆಯಿಂದ ಕೊಡುರಸ್ತೆ ಹಾಗೂ ಚರಂಡಿ ಮಾಡಿಸಲು 50 ಲಕ್ಷ ಬಿಡುಗಡೆ ಮಾಡಿಸಿರುವುದಾಗಿ ಶಾಸಕರು ತಿಳಿಸಿದರು. ಹಾರನಹಳ್ಳಿ ದೊಡ್ಡ ಗ್ರಾಮವಾಗಿದ್ದು ಸುಮಾರು 1ಕೋಟಿಗಿಂ ಹೆಚ್ಚು ಅನುದಾನ ಹಾರನಹಳ್ಳಿ ಸಮಗ್ರ ಅಭಿವೃದ್ದಿಗೆ   ನೀಡಿರುವುದಾಗಿ ತಿಳಿಸಿದರು. ಹಾರನಹಳ್ಳಿ ಸೋಮೇಶ್ವರ ದೇವಾಲಯ, ಕೋಟೆ ದುರಸ್ತಿ ಬಗ್ಗೆ ಪ್ರಾಚ್ಯ ವಸ್ತು ಇಲಾಖೆಗೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.  ಮುಂದಿನ ವರ್ಷ ಶ್ರವಣಬೆಳಗೂಳ ಮಸ್ತಕಾಭಿಷೇಕ  ಇರುವುದರಿಂದ ತಾಲ್ಲೂಕಿನ ಪ್ರವಾಸಿ ಸ್ಥಳ, ಮೂಲಭೂತ ಸೌಕರ್ಯ ನಾಫಲಕ ಹೀಗೆ ಅನೇಕ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ಮನವಿ ಸಲ್ಲಿಸಲಾಗಿದೆ ಎಂದರು  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅಪ್ಸರ್,ಹಿರಿಯಣ್ಣ, ಪಿಡಿಓ ರವಿ, ಧರ್ಮಣ್ಣ, ನಾಗರಾಜು ರಾಜಣ್ಣ,ಜಗದೀಶ್,ಪ್ರಕಾಶ್, ಕೆಲವು ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದರು.


(ಚಿತ್ರ - ವರದಿ : ಹಾರನಹಳ್ಳಿ ಚಿನ್ಮಯ್)


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....