ಸೋಮವಾರ, ಏಪ್ರಿಲ್ 24, 2017

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಇಂದು (ಏಪ್ರಿಲ್ 24) ಕರ್ನಾಟಕ ಚಿತ್ರರಂಗದ ಕಣ್ಮಣಿ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ನಟಸಾರ್ವಭೌಮ, ಗಾನಗಂಧರ್ವ, ಕಲಾಜ್ಯೋತಿ. ರಸಿಕರ ರಾಜ, ಕಲಾ ಕೌಸ್ತುಭ, ಪದ್ಮಭೂಷಣ ಡಾ.ರಾಜ್ ಕುಮಾರ್ ರವರ 88ನೇ ಹುಟ್ಟುಹಬ್ಬ.  ಈ ಮಹಾನ್ ಚೇತನದ ಹುಟ್ಟುಹಬ್ಬದ ಸಂದರ್ಭದಲ್ಲಿ, ಅರಸೀಕೆರೆಗೆ 1968ರಲ್ಲಿ ಭೇಟಿ ನೀಡಿದ್ದ ಡಾ.ರಾಜ್ ಕುಮಾರ್ ರವರ ಕೆಲವು ಅಪರೂಪದ ಚಿತ್ರಗಳನ್ನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಬಯಸುತ್ತೇವೆ.

ಡಾ. ರಾಜ್ ಕುಮಾರ್ ರವರ 100 ಚಿತ್ರ “ಭಾಗ್ಯದ ಬಾಗಿಲು”. 1968 ರಲ್ಲಿ ತೆರೆಕಂಡ ಈ ಚಿತ್ರ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು.  ಈ ಚಿತವು ಅರಸೀಕೆರೆಯಲ್ಲಿಯೂ ಶತದಿನೋತ್ಸವ ಆಚರಿಸಿತು.  ಈ ಸಂಭ್ರಮಾಚರಣೆಗಾಗಿ ಅರಸೀಕೆರೆಗೆ ಖುದ್ದು ರಾಜ್ ಕುಮಾರ್ ರವರು ಆಗಮಿಸಿದ್ದರು.  ಅರಸೀಕೆರೆಯ ಡಬಲ್ ಸವರನ್ ಕಂಪನಿಯ ಮಾಲೀಕರಾದ ಬಿ.ಪಿ.ಮಲ್ಲಿಕಾರ್ಜುನಪ್ಪನವರ ಲಾರಿಯ ಮೇಲೆ ರಾಜ್ ಕುಮಾರ್ ರವರ ಮೆರವಣಿಗೆ ಅಪಾರ ಅಭಿಮಾನಿಗಳ ನಡುವೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.  ನಂತರ ನಡೆದ ಸಮಾರಂಭದಲ್ಲಿ ಅಂದಿನ ಪುರಸಭಾ ಅಧ್ಯಕ್ಷರಾಗಿದ್ದ ಕೆ.ಪಿ.ಸುಂದರರಾಜ ಶೆಟ್ಟಿ ರವರು ರಾಜ್ ಕುಮಾರ್ ರವರನ್ನು ಸನ್ಮಾನಿಸಿದರು.  ಇದೇ ಸಮಾರಂಭದಲ್ಲಿ ಅರಸೀಕೆರೆಯಲ್ಲಿ  ರಾಜ್ ಕುಮಾರ್ ರವರಿಗೆ “ನಟಸಾರ್ವಭೌಮ” ಎಂಬ ಬಿರುದನ್ನು ನೀಡಲಾಯಿತು (ಈ ಬಗ್ಗೆ ಅಧಿಕೃತವಾದ / ಲಿಖಿತವಾದ ಯಾವುದೇ ದಾಖಲೆಗಳು ನಮಗೆ ದೊರೆತಿರುವುದಿಲ್ಲ.  ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರಸೀಕೆರೆಯ ಅನೇಕ ಹಿರಿಯರು ಈ ಮಾತನ್ನು ಅನುಮೋದಿಸಿರುವುದರಿಂದ ಇಲ್ಲಿ ಉಲ್ಲೇಖಿಸಿದ್ದೇವೆ).   ಕಾರ್ಯಕ್ರಮದ ನಂತರ ಡಬಲ್ ಸವರನ್ ಕಂಪನಿಯ ಮಾಲೀಕರಾದ ಬಿ.ಪಿ.ಮಲ್ಲಿಕಾರ್ಜುನಪ್ಪನವರ ಮನೆಯಲ್ಲಿ ನೆಲದಲ್ಲಿಯೇ ಕುಳಿತು ರಾಜ್ ಕುಮಾರ್ ರವರು ಊಟ ಮಾಡಿದ್ದರು.  ಮಲ್ಲಿಕಾರ್ಜುನಪ್ಪನವರ ಕುಟುಂಬದವರು ರಾಜ್ ಕುಮಾರ್ ರವರ ಜೊತೆ ಒಂದು ಗ್ರೂಪ್ ಫೋಟೋ  ತೆಗೆಸಿಕೊಂಡಿದ್ದರು.

(ಚಿತ್ರಗಳು : ದಿ.ಬಸವರಾಜ್, ಸಂಸ್ಥಾಪಕರು, ಬಸವರಾಜ್ ಸ್ಟೂಡಿಯೋ, ಅರಸೀಕೆರೆ)
(ಚಿತ್ರಗಳ ಸಂಗ್ರಹಣೆ / ಮಾಹಿತಿ : ಶ್ರೀ.ಟಿ.ಎಸ್.ರವೀಂದ್ರನಾಥ್, ಮಾಲೀಕರು ಸಂತ್ಯಕಾಂತ ಫರ್ನೀಚರ್ಸ್, ಪೇಟೆಬೀದಿ ಅರಸೀಕೆರೆ)

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

ಅರಸೀಕೆರೆ ಪುರಸಭಾ ಅಧ್ಯಕ್ಷರಾಗಿದ್ದ ಕೆ.ಪಿ.ಸುಂದರರಾಜ ಶೆಟ್ಟಿ ರವರು ರಾಜ್ ಕುಮಾರ್ ರವರನ್ನು ಸನ್ಮಾನಿಸಿದರು 

ಅರಸೀಕೆರೆಯಲ್ಲಿ ಡಾ.ರಾಜ್ ಕುಮಾರ್ – ನಟಸಾರ್ವಭೌಮನ ಅಪರೂಪದ ಚಿತ್ರಗಳು

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....