ಸೋಮವಾರ, ಮೇ 15, 2017

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

Arsikere :


ಆಧುನಿಕ ಸಮಾಜದಲ್ಲಿ  ಬೃಹದಾಕಾರವಾಗಿ ಬೆಳೆಯುತ್ತಿರುವ ಯುವ ಜನತೆ, ಸ್ವಾವಲಂಭಿ ಜೀವನ ನಡೆಸಲು ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆ ಕೌಶಲ್ಯ ಕಾರ್ಯಕ್ರಮದಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಯುವಕರು ಉದಾಸೀನ ಮನೋಭಾವ ತೊರೆದು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸೋಮವಾರ ತಿಳಿಸಿದರು.

ನಗರದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಆಯೋಜಿಸಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೌಶಲ್ಯ  ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಇಂದು ಬೆಂಗಳೂರಿನಲ್ಲಿ ಕೌಶಲ್ಯ ಮಿಶನ್ ಯೋಜನೆಯಡಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದು, 18 ರಿಂದ 35 ವರ್ಷದೊಳಗಿರುವ ಗ್ರಾಮೀಣ ಭಾಗದ ಹಾಗೂ ನಗರ ವ್ಯಾಪ್ತಿಯ ಎಲ್ಲಾ ಯುವಕರು, ಯುವತಿಯರು ವಿದ್ಯಾವಂತ, ಅವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರು ಹೆಸರು ನೋಂದಾಯಿಸಿಕೊಂಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಎಂಬುದು ಯುವಕರನ್ನುಪೆಡಂಬೂತವಾಗಿ ಕಾಡುತ್ತಿದೆ. ಅಲ್ಲದೆ ನಿರುದ್ಯೋಗ ಎಂಬುದು ದೇಶದ ಪ್ರಧಾನ ಸಮಸ್ಯೆಯಾಗಿದೆ. ಪ್ರತಿ ವರ್ಷ ಎಸ್.ಎಸ್. ಎಲ್.ಸಿ, ಪಿಯುಸಿ, ಮತ್ತು ಪದವಿಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉದ್ಯೋಗವಿಲ್ಲದೆ  ನಿರುದ್ಯೋಗಿಗಳಾಗಿ ಕಾಲಹರಣ ಮಾಡುವಂತಾಗಿದೆ.  ಈ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ,ಯುವತಿಯರಿಗೆ ಕುಶಲ ತರಬೇತಿ ಕಾರ್ಯಕ್ರಮ ಸುವರ್ಣಾವಕಾಶ ಒದಗಿಸಿದ್ದು, ಈ ದಿಶೆಯಲ್ಲಿ ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಸ್ವಾವಲಂಬಿಗಳಾಗಿ ಎಂದು ಅವರು ಹೇಳಿದರು.

ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ, ಉಪಾಧ್ಯಕ್ಷ ಮಹೇಶ್ವರಪ್ಪ, ಜಿ.ಪಂ ಸದಸ್ಯ ಆಶೋಕ್, ತಹಶೀಲ್ದಾರ್ ನಟೇಶ್, ಬಿಇಒ ನಟರಾಜ್, ಸಿಡಿಪಿಒ ಪ್ರಕಾಶ್ ಬಿ.ಸಿಎಂ. ಅಧಿಕಾರಿ ಶಿವಣ್ಣ ಉಪಸ್ಥಿತರಿದ್ದರು.ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಅರಸೀಕೆರೆ ಪಟ್ಟಣದಲ್ಲಿ ಸರ್ಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....