ಗುರುವಾರ, ಮೇ 11, 2017

ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ ಬಸ್

Arsikere


ಅರಸೀಕೆರೆ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ  ಅವಘಡ ಸಂಭವಿಸಿದೆ.  ಹ್ಯಾಂಡ್ ಬ್ರೇಕ್ ಹಾಕದೇ ಪ್ಲಾಟ್ ಫಾರಂ ನಲ್ಲಿ ನಿಂತಿದ್ದ ಬಳ್ಳಾರಿ-ಸಕಲೇಶಪುರ ಬಸ್ಸಿಗೆ ಹಿಂಬದಿಯಿಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದ್ದರಿಂದ ಮುಂದೆ ಚಲಿಸಿದ ಬಸ್, ಪ್ರಯಾಣಿಕರು ಕೂರಲು ನಿರ್ಮಿಸಿರುವ ಕಲ್ಲುಬೆಂಚಿಗೆ ಡಿಕ್ಕಿ ಹೊಡೆದಿದೆ.  ಅದೃಷ್ಟವಶಾತ್ ಆ ಜಾಗದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.  ಬಸ್ ಗುದ್ದಿದ ಪರಿಣಾಮ ಎರಡು ಕಲ್ಲುಬೆಂಚುಗಳು ಸಂಪೂರ್ಣವಾಗಿ ಕಿತ್ತುಹೋಗಿವೆ.  ಬಸ್ ಚಾಲಕರ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

(ಚಿತ್ರ ಮಾಹಿತಿ : ಹೆಚ್.ರಾಮಚಂದ್ರ)Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....