ಶನಿವಾರ, ಅಕ್ಟೋಬರ್ 28, 2017

ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ

ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಇಂದು ರಾತ್ರಿ ಅರಸೀಕೆರೆ ಕಂತೇನಹಳ್ಳಿ ಕರೆಯ ಅಂಗಳದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರಾಜ್ ಕಮಲ್ ಫೈರ್ ವರ್ಕ್ಸ್ ಮಾಲೀಕರಾದ ಶಂಕರಾಚಾರ್ ರವರಿಂದ ಭಾರೀ ಮದ್ದುಗುಂಡುಗಳ ಪ್ರದರ್ಶನ ನಡೆಯಿತು.
ಒಟ್ಟು 350 ವಿವಿಧ ಬಗೆಯ ಚಿತ್ತಾಕರ್ಷಕ ಔಟ್ಸ್ ಗಳು ಮತ್ತು 1500 ಅಡಿ ಉದ್ದದ ರಣಪ್ರಚಂಡ ಪಟಾಕಿ ಸೇರಿದಂತೆ ಹಲವು ಬಗೆಯ ಮದ್ದುಗುಂಡುಗಳ ಪ್ರದರ್ಶನ ನಡೆಸಿಕೊಟ್ಟರು.
ಕೆರೆ ಏರಿಯ ಉದ್ದಕ್ಕೂ ಸುಮಾರು 7 ರಿಂದ 8 ಸಾವಿರ ಜನ ವೀಕ್ಷಿಸಿದರು.
ಅರಸೀಕೆರೆ DySP ಸದಾನಂದ ತಿಪ್ಪಣ್ಣನವರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.Share:

ಶುಕ್ರವಾರ, ಅಕ್ಟೋಬರ್ 27, 2017

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯ ವಿಸರ್ಜನಾ ಮಹೋತ್ಸವದ ಮೆರವಣಿಗೆ

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯ ವಿಸರ್ಜನಾ ಮಹೋತ್ಸವದ ಮೆರವಣಿಗೆಗೆ ಶಾಸಕರಾದ ಶ್ರೀ.ಶಿವಲಿಂಗೇಗೌಡರು ಶ್ರೀಯವರ ಮಯೂರ ವಾಹನಕ್ಕೆ ಈಡುಗಾಯಿ ಹಾಕುವುದರ ಮೂಲಕ ಚಾಲನೆ ನೀಡಿದರು.
ಅರಸೀಕೆರೆ ನಗರಸಭೆ ಅಧ್ಯಕ್ಷ ಸಮೀಉಲ್ಲ, ಉಪಾಧ್ಯಕ್ಷ ಪಾರ್ಥಸಾರಥಿ, ನಗರಸಭೆ ಸದಸ್ಯರುಗಳು, ಪೊಲೀಸ್ DySP ಸದಾನಂದ ತಿಪ್ಪಣ್ಣನವರ್, ಉದ್ಯಮಿ ಅರುಣ್ ಕುಮಾರ್, ಪ್ರಸನ್ನ ಗಣಪತಿ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು

Share:

ಮಂಗಳವಾರ, ಅಕ್ಟೋಬರ್ 24, 2017

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವಕ್ಕೆ ಸ್ವಾಗತ

"ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವ"

ಶ್ರೀ ಪ್ರಸನ್ನ ಗಣಪತಿ ಸ್ವಾಮಿಯವರ 76 ನೇ ವರ್ಷದ ವಿಸರ್ಜನಾ ಮಹೋತ್ಸವದ ಕಾರ್ಯಕ್ರಮಗಳು ದಿನಾಂಕ 27-10-2017, ಶುಕ್ರವಾರ ಸಂಜೆ 4 ಗಂಟೆಗೆ ಪ್ರಾರಂಭಗೊಂಡು ದಿನಾಂಕ 28-10-2017, ಶನಿವಾರದಂದು ರಾತ್ರಿ 8 ಗಂಟೆಗೆ ಪಟ್ಟಣದ ಕಂತೇನಹಳ್ಳಿ ಕೆರೆಯಲ್ಲಿ ಶ್ರೀಯವರ ವಿಸರ್ಜನೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ದಿನಾಂಕ 27-10-2017, ಶುಕ್ರವಾರ ಸಂಜೆ 4 ಗಂಟೆಗೆ, ಪುಷ್ಪಾಲಂಕೃತ ಮಯೂರ ದರ್ಬಾರ್ ಅಲಂಕಾರದಿಂದ ನಿರ್ಮಿಸಿರುವ ವಾಹನದಲ್ಲಿ  ಶ್ರೀ ಪ್ರಸನ್ನ ಗಣಪತಿಯವರ ಮೆರವಣಿಗೆ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಸಾಗಲಿದೆ.

"ಮೆರವಣಿಗೆಯ ಮಾರ್ಗಗಳು" :-
ರೀಡಿಂಗ್ ರೂಂ ರಸ್ತೆ, ಸಂತೇಪೇಟೆ, ಶಿವಾಲಯ, ಪೇಟೆಬೀದಿ, ಹಾಸನ ರಸ್ತೆ, ತರಕಾರಿ ಮಾರ್ಕೆಟ್ ವೃತ್ತ, ಪಿ.ಪಿ.ಸರ್ಕಲ್,  ರೈಲ್ವೆ ನಿಲ್ದಾಣ, ಪುನಃ ಬಿ.ಹೆಚ್.ರಸ್ತೆಯ ಮೂಲಕ ಪಿ.ಪಿ.ಸರ್ಕಲ್, ತರಕಾರಿ ಮಾರ್ಕೆಟ್ ವೃತ್ತ, ರೀಡಿಂಗ್ ರೂಂ ರಸ್ತೆ ಮೂಲಕ ಯಜಮಾನ್ ರಂಗೇಗೌಡರ ಬೀದಿ, ಶ್ಯಾನುಭೋಗರ ಬೀದಿ, ಕರಿಯಮ್ಮನ ಗುಡಿ ರಸ್ತೆ, ಗರುಡನಗಿರಿ ರಸ್ತೆ, ಸಂತೇ ಮೈದಾನ, ಸಾಯಿನಾಥ ರಸ್ತೆ, ಹರಿಜನ ಕಾಲೋನಿ, ಸುಭಾಷ್ ನಗರ, ನಿರಂಜನ ಸರ್ಕಲ್, ಲಕ್ಷ್ಮೀಪುರ, ಮಿನಿ ವಿಧಾನಸೌಧ, ಆರ್.ಎಂ.ಸಿ ಯಾರ್ಡ್, ಅಲ್ಲಿಂದ ಬಿ.ಹೆಚ್.ಮಾರ್ಗವಾಗಿ ಹೊರಟು ಕಂತೇನಹಳ್ಳಿ ಸೇರುವುದು.

"ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾ ತಂಡಗಳು" :-
ಡಂಕಣಿ ಕೋಟೆ ಶಿವಶಕ್ತಿ ಕೀಲುಕುದುರೆ ಸಂಘದವರಿಂದ ಕೀಲುಕುದುರೆ ನರ್ತನ, ಮೇಘ ಡ್ರಂಸೆಟ್, ರಾಣಿಬೆನ್ನೂರು ಶಾರದಾ ರೋಡ್ ಆರ್ಕೇಸ್ಟ್ರಾ, ಕರಡೇ ವಾದ್ಯ, ಕಹಳೆ ವಾದ್ಯ, ವೀರಭದ್ರ ಕುಣಿತ, ತಮಟೆ ವಾದ್ಯ ಮೊದಲಾದ ಕಲಾ ತಂಡಗಳು ಪಾಲ್ಗೊಳ್ಳಲಿವೆ.

"ಕೀಲು ಕುದುರೆ ಪ್ರದರ್ಶನಗೊಳ್ಳಲಿರುವ ಸ್ಥಳಗಳು" :-
ಪೆಂಡಾಲ್ ಹಿಂಭಾಗ, ಶ್ರೀ ವೆಂಕಟೇಶ್ವರ ಕಲಾಭವನದ ಮುಂಭಾಗ, ಶಾನುಭೋಗರಬೀದಿ ಸರ್ಕಲ್, ಸಂತೇಪೇಟೆ ಸರ್ಕಲ್, ಕೆಪಿಆರ್ ಕಡ್ಲೆಮಿಲ್ ಸರ್ಕಲ್, ಪೇಟೆಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗ, ಹಾಸನ ವೃತ್ತ, ಹಾಸನ ರಸ್ತೆ, ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ, ಅಶೋಕ ಹೋಟೆಲ್ ಮುಂಭಾಗ, ಪಿಪಿ ವೃತ್ತ, ರೈಲ್ವೆ ಸ್ಟೇಷನ್ ಮುಂಭಾಗ.

"ಪಟಾಕಿ, ಮದ್ದುಗುಂಡುಗಳ ಪ್ರದರ್ಶನ" :-
ಅರಸೀಕೆರೆಯ ಹೆಸರಾಂತ ರಾಜ್ ಕಮಲ್ ಫೈರ್ ವರ್ಕ್ಸ್ ಮಾಲೀಕರಾದ ಶಂಕರಾಚಾರ್ ರವರಿಂದ.
ದಿನಾಂಕ 27-10-2017, ಶುಕ್ರವಾರ ರಾತ್ರಿ 10 ಗಂಟೆಗೆ ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ.
ಮತ್ತು
ದಿನಾಂಕ 28-10-2017, ಶನಿವಾರ ರಾತ್ರಿ 8 ಗಂಟೆಗೆ ಅರಸೀಕೆರೆ ಕಂತೇನಹಳ್ಳಿ ಕೆರೆಯ ಅಂಗಳದಲ್ಲಿ ಭಾರಿ ಮದ್ದುಗುಂಡುಗಳ ಪ್ರದರ್ಶನ ಏರ್ಪಡಿಸಲಾಗಿದೆ.

ದಿನಾಂಕ 28-10-2017, ಶನಿವಾರದಂದು ಸಂಜೆ 6.30ಕ್ಕೆ ಶ್ರೀಯವರ ಉತ್ಸವ ಕಂತೇನಹಳ್ಳಿ ತಲುಪಲಿದೆ. ರಾತ್ರಿ 8 ಗಂಟೆಗೆ  ಕಂತೇನಹಳ್ಳಿ ಕೆರೆಯಲ್ಲಿ ಶ್ರೀಯವರ ವಿಸರ್ಜನೆ ಜರುಗಲಿದೆ.

"ಸರ್ವರಿಗೂ ಆದರದ ಸ್ವಾಗತ"

ಅರಸೀಕೆರೆ.in
www.arsikere.in


Share:

ಸೋಮವಾರ, ಅಕ್ಟೋಬರ್ 2, 2017

ಗಾಂಧಿ ಜಯಂತಿ
ಅರಸೀಕೆರೆ ಪಟ್ಟಣದ ಹೊರವಲಯದಲ್ಲರುವ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆವರಣದಲ್ಲಿರುವ ಮಹಾತ್ಮ ಗಾಂಧೀಜಿಯವರ ಪವಿತ್ರ ಚಿತಾಭಸ್ಮ ಸಮಾಧಿಗೆ “ಗಾಂಧಿ ಜಯಂತಿ”ಯ ಅಂಗವಾಗಿ ಇಂದು ಕಸ್ತೂರಬಾ ಆಶ್ರಮದ ವಸತಿಶಾಲೆಯಲ್ಲಿರುವ ಮಕ್ಕಳು ಪುಷ್ಪನಮನ ಸಲ್ಲಿಸಿದರು. 


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....